Home ವನಿತೆ How to get periods immediately to avoid pregnancy – ಗರ್ಭಧಾರಣೆಯನ್ನು ತಡೆಯಲು ತಕ್ಷಣ...

How to get periods immediately to avoid pregnancy – ಗರ್ಭಧಾರಣೆಯನ್ನು ತಡೆಯಲು ತಕ್ಷಣ ತಡೆಯಲು ಋತುಸ್ರಾವವನ್ನು ಹೊಂದುವುದು ಹೇಗೆ

ಮಹಿಳೆ ವಿವಾಹಿತೆಯಾಗಿರಲ್ಲಿ ಅಥವಾ ಅವಿವಾಹಿತೆಯಾಗಿರಲಿ., ಸಂಭೋಗದ ನಂತರ ಮುಟ್ಟಾಗದಿರುವುದು ಆತಂಕ ತರುವ ವಿಷಯ. ತಿಂಗಳಿನಲ್ಲಿ ಕೆಲವು ದಿನಗಳನ್ನು ಸುರಕ್ಷಿತ ಕಾಲ ಎಂದು ಕರೆಯಲಾಗುತ್ತದೆ ಈ ಕಾಲದಲ್ಲಿ ಸಂಭೋಗವನ್ನು ಹೊಂದಿದರೆ ಗರ್ಭವತಿಯಾಗುವ ಅವಕಾಶ ಬಹಳ ಕಡಿಮೆ ಇರುತ್ತದೆ. ಆದರೆ ಮೋಹದ ಉನ್ಮತ್ತತೆಯಲ್ಲಿರುವಾಗ ನೀವು ಸುರಕ್ಷಿತ ಕಾಲಕ್ಕಾಗಿ ಕಾದು ಕೂರದೆ ಇರಬಹುದು ಆದರೆ ಗರ್ಭವತಿಯಾಗುವುದು ನಿಮ್ಮಗೆ ಬೇಕಾಗದೆ ಇರಬಹುದು. ಇದಕ್ಕೆ ತ್ವರಿತ ನಿವಾರಣೆ ಬೇಕಾಗಿದ್ದರೆ ಮಾರುಕಟ್ಟೆಯಲ್ಲಿ ದೊರೆಯುವ ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸಬಹುದು. ಆದರೆ ಅದು ಕೃತ್ರಿಮವಾಗಿ ಮಾಡಲ್ಪಟ್ಟಿದ್ದು ನಿಮ್ಮಗೆ ಹಾನಿಯನ್ನು ಉಂಟುಮಾಡಬಹುದು. ಇದನ್ನು ನಿಯಮಿತವಾಗಿ ಬಳಸುವುದರಿಂದ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ಇದಕ್ಕೆ ಬದಲಾಗಿ ನೈಸರ್ಗಿಕವಾದ ಪದ್ಧತಿಯನ್ನು ಬಳಸಿ ನಿಮ್ಮ ಗರ್ಭಧಾರಣೆಯನ್ನು ತಡೆಯಬಹುದು. ಬಹಳಷ್ಟು ಮಂದಿ ಈ ವಿಧಾನದಿಂದ ಲಾಭಗಳನ್ನು ಪಡೆಯುತ್ತಿದ್ದಾರೆ. ನೀವು ಸಹ ನಿಮ್ಮ ಋತುಸ್ರಾವ ತಪ್ಪಿದಾಗ ಈ ವಿಧಾನದ ಲಾಭವನ್ನು ಪಡೆಯಬಹುದು.

ಗರ್ಭಧಾರಣೆ ತಡೆದು ಋತುಸ್ರಾವವನ್ನು ಪಡೆಯುವುದು ಹೇಗೆ? (How to avoid pregnancy and get periods?)

ಅಸ್ಪಿರೀನ್ (Aspirins)

ಬಹಳಷ್ಟು ಮಹಿಳೆಯರು ಅಸ್ಪಿರೀನ್ ತೆಗೆದುಕೊಂಡು ಋತುಸ್ರಾವವನ್ನು ತಡೆದಿದ್ದಾರೆ. ಇದನ್ನು ಬಳಸಿದ ನಂತರ ನೀವು ನಿಮ್ಮ ಇಚ್ಛೆಯಂತೆ ಋತುಸ್ರಾವವನ್ನು ಪಡೆಯಬಹುದು. ಅರ್ಧ ಬಟ್ಟಲಿನಲ್ಲಿ ನೀರು ತೆಗೆದುಕೊಂಡು ಅದರಲ್ಲಿ ಎರಡು ಅಸ್ಪಿರೀನ್ ಗುಳಿಗೆಗಳನ್ನು ಅರೆದು ಹಾಕಿರಿ. ಇದರಿಂದ ಸಂಭೋಗದ ನಂತರವೂ ಸಹ ನೀವು ನಿಮ್ಮ ಋತುಸ್ರಾವವನ್ನು ಪಡೆಯಬಹುದು. ಆದರೆ ಇದು ನಿಶ್ಚಿತವಾದ ಔಷಧಿ ಅಲ್ಲ ಎಂಬುದನ್ನು ಗಮನದಲ್ಲಿಡಿ. ಇದು ಕೆಲವೊಮ್ಮೆ ಕೆಲಸ ಮಾಡದೆ ಇರಬಹುದು.

ಋತುಚಕ್ರ ಸಮನ್ವಯವನ್ನು (menstrual synchrony) ಬಳಸಿ (Using menstrual synchrony)

ಋತುಚಕ್ರ ಸಮನ್ವಯ ಎಂಬುದು ಮಾನಸಿಕ ಶಾಸ್ತ್ರದ ಒಂದು ಹೊಸ ಪರಿಕಲ್ಪನೆ. ನೀವು ಋತುಚಕ್ರದಲ್ಲಿರುವ ಇತರೆ ಮಹಿಳೆಯರೊಂದಿಗೆ ನಿಮ್ಮ ಸಮಯ ಕಳೆಯುವುದರಿಂದ ನಿಮ್ಮ ಋತುಚಕ್ರ ಸಹ ಅವರಾದರೊಂದಿಗೆ ಸಮನ್ವಯಗೊಳ್ಳುತ್ತದೆ ಹಾಗೂ ಋತುಸ್ರಾವ ನಿಮ್ಮಗೂ ಆಗುತ್ತದೆ. ಕೆಲವು ಜನರು ಹೇಳುವುದು ಏನೆಂದರೆ ನಿಮ್ಮ ಋತುಸ್ರಾವ ಆಗದೆ ಇರುವಾಗ ಋತುಸ್ರಾವವಾಗುತಿರುವ ಮತ್ತೊಂದು ಮಹಿಳೆಯನ್ನು ಮುಟ್ಟಿದ್ದರು ನೀವು ಮುಟ್ಟಾಗುವ ಸಾಧ್ಯತೆ ಇದೆ.

ಗರ್ಭನಿರೋಧಕ ಮತ್ರೆಗಳನ್ನು ಬಳಸಿ (Birth control pills)

ಗರ್ಭ ನಿರೋಧಕ ಮತ್ರೆಗಳು ಗರ್ಭಧಾರಣೆಯನ್ನು ತಡೆಯುವ ಒಂದು ಸಾಮಾನ್ಯ ವಿಧಾನವಾಗಿದೆ. ದಿನಕ್ಕೆ ಎರಡು ಮೂರು ಮತ್ರೆಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಋತುಸ್ರಾವವನ್ನು ಆರಾಮವಾಗಿ ಹೊಂದಬಹುದು. ನಿರಂತರವಾಗಿ ಸಂಭೋಗ ಹೊಂದುವ ಮಹಿಳೆಯರು ಸುರಕ್ಷಿತವಾದ ಮಾತ್ರೆಗಳನ್ನು ಬಳಸಬೇಕು. ಹೀಗಾಗಿ ನೀವು ಸ್ತ್ರೀ ರೋಗ ತಜ್ಞರನ್ನು ಸಂಪರ್ಕಿಸಿ ಅವರ ನಿಮ್ಮ ದೇಹಕ್ಕೆ ಹೊಂದುವಂತೆ ಸಲಹೆ ಮಾಡುವ ಮಾತ್ರೆಗಳನ್ನು ತೆಗೆದುಕೊಳ್ಳಬಹುದು. ಈ ರೀತಿಯಾಗಿ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಸೇವಿಸಬಹುದು. ನಿರಂತರವಾಗಿ ಸೇವಿಸುವ ಮತ್ರೆಗಳು ತಕ್ಷಣ ಫಲಿತಾಂಶಗಳಿಗಾಗಿ ಸೇವಿಸುವ ಮಾತ್ರೆಗಳಿಗಿಂದ ಸುರಕ್ಷಿತವಾಗಿರುತ್ತವೆ.

ಪೂರ್ವ ತಯಾರಿ (Planning before)

ಗರ್ಭಧಾರಣೆಯನ್ನು ತಡೆದು ಸಾಮಾನ್ಯವಾಗಿ ಋತುಸ್ರಾವ ಹೊಂದಲು ಉತ್ತಮವಾದ ಮಾರ್ಗವೆಂದರೆ ಮುಂಚಿತವಾಗಿ ತಯಾರಿ ಮಾಡಿಕೊಳ್ಳುವುದು. ನಿಮ್ಮ ಜೊತೆಗಾರನೊಂದಿಗೆ ಮುಂಚಿತವಾಗಿ ನಿಮ್ಮ ವಿಶೇಷ ರಾತ್ರಿಯ ಬಗ್ಗೆ ಮಾತಾಡಿ ನಿಮ್ಮ ಋತುಚಕ್ರಕ್ಕೆ ಅನುಗುಣವಾಗಿ ನಿಮ್ಮ ಸುರಕ್ಷಿತ ದಿನಗಳನ್ನು ಆಯ್ದುಕೊಳ್ಳಿ ಹಾಗೂ ನಿಮ್ಮ ವಿಶೇಷ ದಿನಗಳನ್ನು ಅದರೊಂದಿಗೇ ಹೊಂದುವಂತೆ ಯೋಜಿಸಿಕೊಳ್ಳಿ.

ಇತರೆ ಕಾರಣಗಳ ಬಗ್ಗೆ ಗಮನಕೊಡಿ (Consider other factors)

ಸಂಭೋಗದ ನಂತರ ನಿಮ್ಮ ಋತುಸ್ರಾವದ ಬಗ್ಗೆ ನಿಮ್ಮಗೆ ಚಿಂತೆಯಾಗಿರಬಹುದು. ನಿಮ್ಮ ಋತುಸ್ರಾವ ತಡವಾದಷ್ಟೂ ನಿಮ್ಮ ಯೋಚನೆ ಹಾಗೂ ಒತ್ತಡ ಸಹ ಹೆಚ್ಚುತ್ತದೆ. ಆದರೆ ಹೆಚ್ಚಿದ ಒತ್ತಡ ಹಾಗೂ ಯೋಚನೆಗಳಿಂದ ಸಹ ನಿಮ್ಮ ಋತುಸ್ರಾವ ತಡವಾಗಿರಬಹುದು. ಹೀಗಾಗಿ ನಿಮ್ಮ ಋತುಸ್ರಾವದ ತೊಂದರೆಗೆ ಬೇರೆ ಯಾವುದಾದರೂ ಕಾರಣವಿದೆಯೇ ಎಂದು ಯೋಚನೆ ಮಾಡಿ. ಋತುಸ್ರಾವ ತಡವಾಗಲು ಸಂಭೋಗವೊಂದೇ ಕಾರಣವಲ್ಲ.

ಖಾರ ಹಾಗೂ ಬಿಸಿಯಾದ ಆಹಾರ (Hot and spicy food)

ನಿಮ್ಮ ಋತುಚಕ್ರ ತಡವಾಗುತ್ತಿದೆ ಎಂದು ನಿಮ್ಮಗೆ ಅನಿಸಿದರೆ ಖಾರ ಹಾಗೂ ಬಿಸಿ ಹೆಚ್ಚಿರುವ ಆಹಾರವನ್ನು ಸೇವಿಸಿರಿ. ಈ ರೀತಿಯ ಆಹಾರ ಸೇವನೆಯಿಂದ ನಿಮ್ಮ ದೇಹದ ಉಷ್ಣತೆ ಹೆಚ್ಚಾಗಿ ನಿಮ್ಮ ಋತುಸ್ರಾವ ತಕ್ಷಣಕ್ಕೆ ಆಗುತ್ತದೆ. ನೀವು ನಿಮ್ಮ ಋತುಸ್ರಾವ ತಡವಾಗಿ ನೀವು ಯೋಚನೆಗೆ ಈಡಾಗಿದ್ದಾರೆ ಇದೊಂದು ಉತ್ತಮವಾದ ನಿವಾರಣೇ.

“ಸೀ” ಜೀವಸತ್ವ (Vitamin C)

ಕೆಲವೊಮ್ಮೆ ಸೀ ಜೀವಸತ್ವ ಸಹ ಋತುಚಕ್ರವನ್ನು ದಾರಿಗೆ ತರುವಲ್ಲಿ ಅಧ್ಭುತವಾಗಿ ಕೆಲಸ ಮಾಡುತ್ತದೆ. ನೀವು ಮಾಡಬೇಕಿರುವುದೆಲ್ಲ ಸೀ ಜೀವಸತ್ವ ಹೆಚ್ಚಿರುವ ಹಣ್ಣುಗಳನ್ನು ತಿನ್ನುವುದು. ಎಷ್ಟ್ರೋಜೆನ್ ಅನ್ನು ಹೆಚ್ಚಾಗಿ ಉತ್ಪತ್ತಿ ಮಾಡುವ ಸಾಮರ್ಥ್ಯವಿರುವ ಸಿ ಜೀವಸತ್ವ ಸೇವಿಸುವುದರಿಂದ ನಿಮ್ಮ ಗರ್ಭಾಶಯದ ಅಂಚುಗಳಲ್ಲಿ ಎಷ್ಟ್ರೋಜೆನ್ ಉತ್ಪತ್ತಿ ಹೆಚ್ಚಿ ನಿಮ್ಮ ಗರ್ಭಾಶಯ ಸಂಕುಚಿತಗೊಂಡು ಋತುಸ್ರಾವಕ್ಕೆ ಈಡುಮಾಡುತ್ತದೆ. ಇದಲ್ಲದೆ ಸಿ ಜೀವಸತ್ವ ಮತ್ರೆಗಳನ್ನು ಹೆಚ್ಚಾಗಿ ಸೇವಿಸುವುದರಿಂದ ನಿಮ್ಮ ಋತುಸ್ರಾವ ತಕ್ಷಣಕ್ಕೆ ಆಗುತ್ತದೆ.

error: Content is protected !!