Home ಮುಖಲೇಪನಗಳು Best homemade skin whitening & glowing face packs in Kannada language –...

Best homemade skin whitening & glowing face packs in Kannada language – ಗೌರವರ್ಣ ಹಾಗೂ ಕಾಂತಿಯುಕ್ತ ಮುಖಕ್ಕಾಗಿ ಮುಖ ಲೇಪನಗಳು

ನಿಷ್ಕಳಂಕ ಹಾಗೂ ಕಾಂತಿಯುಕ್ತ ಚರ್ಮವನ್ನು ಹೊಂದುವುದು ಪ್ರತಿ ಮಹಿಳೆಯ ಆಸೆಯಾಗಿರುತ್ತದೆ. ಆದರೆ ಅದನ್ನು ಹೊಂದುವುದಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ಅನೇಕ ರಾಸಾಯನಿಕಯುಕ್ತ ಪ್ರಸಾದನ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇದರಿಂದ ಒಳಿತಿಗಿಂತ ಹಾನಿಯೇ ಹೆಚ್ಚಾಗುತ್ತದೆ. ದೇಹದಲ್ಲಿನ ಆಮ್ಲಜನಕ ಹಾಗೂ ರಕ್ತದ ಕಣಗಳ ಕೊರತೆ ಉಂಟಾದಾಗ ಚರ್ಮವು ಮಬ್ಬಾಗಿ ಕಾಂತಿಹೀನವಾಗಿ ಕಾಣುತ್ತದೆ. ಚರ್ಮವು ತನ್ನ ಬಣ್ಣ ಕಳೆದುಕೊಳ್ಳುವುದಕ್ಕೆ ಪರಿಸರದಲ್ಲಿನ ಮಾಲಿನ್ಯ, ಧೂಳು ಹಾಗೂ ಸೂರ್ಯನಿಂದ ಹೊಮ್ಮುವ ಅತಿನೇರಳೆ ಕಿರಣಗಳು ಹೀಗೆ ಅನೇಕ ಕಾರಣಗಳಿರಬಹುದು. ಅದಷ್ಟೇ ಅಲ್ಲದೆ ಪೊಶಕಾಮ್ಶಗಳ ಕೊರತೆ, ಒತ್ತಡ ಹಾಗೂ ವೈಯುಕ್ತಿಕ ಶುಚ್ಚಿತ್ವದ ಕೊರತೆಯಿಂದಲೂ ಸಾಹ ಚರ್ಮ ತನ್ನ ಬಣ್ಣವನ್ನು ಕಳೆದುಕೊಳ್ಳಬಹುದು.

ಗೌರವರ್ಣ ಪ್ರತಿವೊಬ್ಬರ ಆಸೆಯಾಗಿರುತ್ತದೆ ಏಕೆಂದರೆ ಗೌರವರ್ಣ ನಾವು ಚೆಂದವಾಗಿ ಕಾಣುವಲ್ಲಿ ಸಹಾಯ ಮಾಡುತ್ತದೆ ಹಾಗೂ ಕಪ್ಪು ಬಣ್ಣವಿರುವವರಿಗೆ ಹೆಚ್ಚು ವಿಧವಾದ ಬಣ್ಣದ ಬಟ್ಟೆಗಳು ಒಪ್ಪುವುದಿಲ್ಲ ಆದರೆ ಗೌರವರ್ಣ ಇರುವವರು ಅನೇಕ ಬಣ್ಣದ ಬಟ್ಟೆಗಳನ್ನು ತಮ್ಮಗೆ ಒಪ್ಪುವಂತೆ ಧರಿಸಬಹುದು. ಇದರಿಂದ ಗೌರವರ್ಣ ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಹ ಹೆಚ್ಚಿಸುತ್ತದೆ. ಆದರೆ ಎಲ್ಲರೂ ಹುಟ್ಟಿನಿಂದ ಗೌರವರ್ಣವನ್ನು ಪಡೆದಿರುವುದಿಲ್ಲ ಹೀಗಾಗಿ ಬೇರೆ ವಿಧನಗಳಿನ್ದ ಅದನ್ನು ಪಡೆಯಲು ನಾವು ಪ್ರಯತ್ನಿಸುವುತ್ತೇವೆ. ಮಾರುಕಟ್ಟೆಯಲ್ಲಿ ಅನೇಕ ಕ್ರೀಮ್ ಗಳು ನಿಮ್ಮನ್ನು ಬಿಳಿಯಗಿಸುತ್ತೆವೆ ಎಂದು ಹೇಳಬಹುದು ಆದರೆ ಅವುಗಳಲ್ಲಿ ಬಹಳಷ್ಟು ಕ್ರೀಮ್ ಗಳಲ್ಲಿ ಬ್ಲೀಚ್ ಹಾಗೂ ಸ್ಟೀರಾಯ್ಡ್ ಗಳಿರುತ್ತವೆ. ಇದರಿಂದ ಚರ್ಮಕ್ಕೆ ಹಾನಿಯಾಗುತ್ತದೆ ಹಾಗೂ ನಿಮ್ಮ ಚರ್ಮದ ಬಣ್ಣಕ್ಕೆ ಹಾನಿಯಾಗುತ್ತದೆ.
ಆದ್ದರಿಂದ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ನೈಸರ್ಗಿಕ ಔಷಧಿಗಳಿಂದ ನಿಮ್ಮಗೆ ಗೌರವರ್ಣ ಲಭಿಸುವುದಾದರೆ ನೀವು ಈ ಕೂಡಲೇ ಅದನ್ನು ಪಡೆದುಕೊಳ್ಳಬಹುದು.

ಮಾರುಕಟ್ಟೆಯಲ್ಲಿ ದೊರೆಯುವ, ಗೌರವರ್ಣ ಹಾಗೂ ಕಾಂತಿಯುಕ್ತ ಮುಖವನ್ನು ಕಾತ್ರಿ ಮಾಡುವ ಅನೇಕ ಪ್ರಸಾದನ ಉತ್ಪನ್ನಗಳನ್ನು ಬಳಸಿ ಬಳಸಿ ನೀವು ರೋಸಿಹೋಗಿರಬಹುದು. ಅವು ನಿಮ್ಮ ನಿರೀಕ್ಷೆಯನ್ನು ಎಂದಿಗೂ ಮುಟ್ಟಲಾರವು ಅಷ್ಟೇ ಅಲ್ಲದೆ ಆವುಗಳಲ್ಲಿ ಇರುವ ಕೃತಕ ಬಣ್ಣ ಹಾಗೂ ರಾಸಾಯನಿಕಗಳಿಂದ ಅನೇಕ ಅಡ್ಡಪರಿಣಾಮಗಳು ಹಾಗೂ ಚರ್ಮದ ತೊಂದರೆಗಳು ಸಹ ತಲೆದೋರಬಹುದು. ಆದ್ದರಿಂದ ಗೌರವರ್ಣವನ್ನು ಪಡೆಯಲು ಮನೆಮದ್ದಿಗಿಂತ ಉತ್ತಮ ಮಾರ್ಗವಿಲ್ಲ.
ರಾಸಾಯನಿಕ ಪದಾರ್ಥಗಳನ್ನು ಬಳಸಿದರೆ ಚರ್ಮ ಹಾಳಾಗಬಹುದು ಹಾಗೂ ಸ್ಪಾ ಅಥವಾ ಬ್ಯೂಟಿ ಪಾರ್ಲರ್ ಗಳಿಗೆ ಹೋಗಿ ಮುಖ ಲೇಪನ ಹಾಕಿಸಿಕೊಳ್ಳುವುದು ಬಹಳ ದುಬಾರಿಯಾಗುತ್ತದೆ ಹಾಗಾಗಿ ಈ ಕೆಳಗಿನ ಮನೆಮದ್ದುಗಳನ್ನು ಬಳಸಿ ಹಾಗೂ ಸುಲಭವಾಗಿ ನಿಮ್ಮ ಮನೆಯಲ್ಲಿಯೇ ಕೂತು ಗೌರವರ್ಣವನ್ನು ಪಡೆಯಿರಿ. ಈ ಕೆಳಗಿನ ಲೇಖನದಲ್ಲಿ ಹೇಳಿರುವ ಅನೇಕ ಪದರ್ಥಗಳು ನಿಮ್ಮ ಅಡುಗೆಮನೆಯಲ್ಲಿಯೇ ದೊರೆಯುವುದರಿಂದ ನೀವು ಬಹಳ ಸುಲಭವಾಗಿ ಇವುಗಳನ್ನು ಬಳಸಿ ಗೌರವರ್ಣವನ್ನು ಪಡೆಯಬಹುದು.

ಮನೆಯಲ್ಲಿಯೇ ತಯಾರಿಸಿದ ಗೌರವರ್ಣ ನೀಡುವ ಮುಖ ಲೇಪನಗಳು (Home made face packs for skin fairness)

ಗೌರವರ್ಣಕ್ಕಾಗಿ ಮುಖ ಲೇಪನಗಳು (Face packs for fair skin)

  • ಟಿ ಕಷಾಯ
  • ಅಕ್ಕಿಹಿಟ್ಟು ಹಾಗೂ
  • ಜೇನುತುಪ್ಪ

– ಒಂದು ಬಟ್ಟಲು ಟಿ ಕಷಾಯಕ್ಕೆ ಅರ್ಧ ಚಮಚೆ ಜೇನುತುಪ್ಪ ಹಾಗೂ ಎರಡು ಚಮಚೆ ಅಕ್ಕಿಹಿಟ್ಟನ್ನು ಬೆರೆಸಿ ನಿಮ್ಮ ಮುಖಕ್ಕೆ ಮಾಲಿಶು ಮಾಡಿರಿ. ಅದನ್ನು ಹದಿನೈದರಿಂದ ಇಪತ್ತು ನಿಮಿಷ ಮುಖದ ಮೇಲೆಯೇ ಬಿಟ್ಟು ನಂತರ ಅದನ್ನು ವರ್ತುಲಾಕಾರದಲ್ಲಿ ತಿಕ್ಕಿ ತೆಗೆಯಿರಿ. ನೆನಪಿಡಿ ತಿಕ್ಕುವುದರಿಂದ ನಿರ್ಜೀವ ಕಣಗಳೆಲ್ಲಾ ಹೊರಬರುವುದರಿಂದ ನಿಮ್ಮ ಚರ್ಮದ ಬಣ್ಣ ತಿಳಿಯಾಗುತ್ತದೆ.

ಈ ಮುಖಲೇಪನದಲ್ಲಿರುವ ಅಕ್ಕಿಹಿಟ್ಟು ನೈಸರ್ಗಿಕ ಸ್ಕ್ರಬ್ ಆಗಿರುವುದರಿಂದ ನಿಮ್ಮ ನಿರ್ಜೀವ ಕಣಗಳನ್ನು ತೆಗೆದುಹಾಕುತ್ತದೆ ಹಾಗೂ ಜೇನುತುಪ್ಪ ನಿಮ್ಮ ಚರ್ಮದ ತೇವಾಂಶವನ್ನು ಹೆಚ್ಚಿಸುತ್ತದೆ.

ಅರಿಶಿನ ಮುಖ ಲೇಪನ (Turmeric face pack)

  • ಅರಿಶಿನ
  • ನಿಂಬೆರಸ
  • ಹೆಸರು ಹಿಟ್ಟು ಹಾಗೂ
  • ಹಾಲು

– ಒಂದು ಬಟ್ಟಲಲ್ಲಿ ಎರಡು ಚಮಚೆ ಹಾಲು ತೆಗೆದುಕೊಂಡು ಅದಕ್ಕೆ ಅರ್ಧ ಚಮಚೆ ನಿಂಬೆಹಣ್ಣಿನ ರಸ, ಅರ್ಧ ಚಮಚೆ ಅರಿಶಿನ ಹಾಗು ಎರಡು ಚಮಚೆ ಹೆಸರು ಹಿಟ್ಟನ್ನು ಬೆರೆಸಿರಿ.

– ಮೇಲಿನ ಎಲ್ಲಾ ಪದರ್ಥಗಳನ್ನು ಚೆನ್ನಾಗಿ ಕಲೆಸಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಹದಿನೈದು ನಿಮಿಶಗಳು ಅದನ್ನು ಮುಖದ ಮೇಲೆಯೇ ಒಣಗಲು ಬಿಡಿ.
– ನಂತರ ನಿಮ್ಮ ಮುಖವನ್ನು ನೀರಿನಿಂದ ತೊಳೆದು ಹತ್ತಿಯ ಮೆದುವಾದ ಬಟ್ಟೆಯಿಂದ, ಮೃದುವಾಗಿ ತಟ್ಟಿ ಒಣಗಿಸಿ.

ಹಾಲು ಹಾಗೂ ಜೇನಿನ ಮುಖ ಲೇಪನ (Milk and honey face pack)

  • ಹಾಲು
  • ಜೇನುತುಪ್ಪ ಹಾಗೂ
  • ನಿಂಬೆ ರಸ

– ಒಂದು ಚಮಚೆ ಹಾಲಿಗೆ ಅಥವಾ ಹಾಲಿನ ಪುಡಿಗೆ ಒಂದು ಚಮಚೆ ಜೇನುತುಪ್ಪ ಹಾಗೂ ಒಂದು ಚಮಚೆ ನಿಂಬೆರಸವನ್ನು ಬೆರೆಸಿರಿ.
– ಮೇಲಿನ ಮೂರು ಪದರ್ಥಗಳನ್ನು ಬೆರೆಸಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.
– ಹದಿನೈದು ನಿಮಿಷಗಳ ತರುವಾಯ ನೀರಿನಿಂದ ಮುಖವನ್ನು ತೊಳೆದುಕೊಳ್ಳೀ.

ಮೊಸರು ಹಾಗೂ ಓಟ್ ಮೀಲ್ ನ ಮುಖ ಲೇಪನ (Yogurt and oatmeal face pack)

  • ಓಟ್ ಮೀಲ್
  • ಮೊಸರು
  • ಟೊಮ್ಯಾಟೋ

– ಒಂದು ಚಮಚೆ ಮೊಸರು, ಒಂದು ಚಮಚೆ ಟೊಮ್ಯಾಟೋ ರಸ ಹಾಗೂ ಒಂದು ಚಮಚೆ ಓಟ್ ಮೀಲ್ ಅನ್ನು ತೆಗೆದುಕೊಂಡು ಅರೆದುಕೊಳ್ಳಿ.
– ಅರೆದ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ ಹಾಗೂ ಹದಿನೈದರಿಂದ ಇಪ್ಪತ್ತು ನಿಮಿಷ ಒಣಗಲು ಬಿಡಿ.

– ನಂತರ ನೀರಿನಿಂದ ಮುಖವನ್ನು ತಿಕ್ಕಿ ತೊಳೆಯಿರಿ. ಇದರಿಂದ ಮಿಶ್ರಣದಲ್ಲಿರುವ ಓಟ್ ಮೀಲ್ ಮುಖದ ಮೇಲಿರುವ ನಿರ್ಜೀವ ಕಣಗಳನ್ನು ತೆಗೆಯಲು ಸಹಾಯವಾಗುತ್ತದೆ.

ಚರ್ಮ ಬಿಳಿಯಾಗಲು ಆಲೂಗಡ್ಡೆ ತಿರುಳಿನಿಂದ ನೈಸರ್ಗಿಕ ಮುಖ ಲೇಪನ (Potato pulp for natural face pack for skin whitening)

ಚರ್ಮದ ಆರೈಕೆಯಲ್ಲಿ ಅಲುಗಡ್ಡೆ ಪ್ರಮುಖ ಪಾತ್ರ ವಹಿಸುತ್ತದೆ. ಆಲೂಗಡ್ಡೆಯಲ್ಲಿ ಹೇರಳವಾಗಿರುವ “ಸೀ” ಜೀವಸತ್ವ ಚರ್ಮದ ಆರೋಗ್ಯವನ್ನು ಕಾಪಾಡಲು ಬಹಳ ಸಹಾಯಕಾರಿ ಹಾಗೂ ಚರ್ಮವನ್ನು ಬಿಳಿಯಾಗಿಸಲು ಸಹಾಯಮಾಡುತ್ತದೆ. ಹಸಿ ಆಲೂಗಡ್ಡೆಯನ್ನು ರುಬ್ಬಿಕೊಂಡು ಆ ತಿರುಳನ್ನು ಮುಖಕ್ಕೆ ಹಚ್ಚಿಕೊಳ್ಳಿ. ಮೂವತ್ತ್ತು ನಿಮಿಷಗಳ ನಂತರ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಚರ್ಮವು ಸ್ವಚ್ಛವಾಗಿ, ಕಾಂತಿಯುಕ್ತವಾಗಿ ಹಾಗೂ ನುಣುಪಾಗಿ ಕಾಣುತ್ತದ್ದೆ. ಆಲೂಗಡ್ಡೆಯ ರಸವನ್ನು ನಿಂಬೆ ಹಣ್ಣಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಬಹುದು. ಇದರಿಂದ ಚರ್ಮವು ನೈಸರ್ಗಿಕವಾಗಿ ತಿಳಿಯಾಗುತ್ತದೆ. ನಿಂಬೆ ನೈಸರ್ಗಿಕ ಬ್ಲೀಚ್ ಸಹ ಆಗಿರುವುದರಿಂದ ತ್ವರಿತ ಫಲಿತಾಂಶವನ್ನು ನೋಡಬಹುದು.

ಮೊಸರಿನಲ್ಲಿರುವ ನೈಸರ್ಗಿಕ ಬ್ಲೀಚ್ ನ ಗುಣದಿಂದ ಚರ್ಮದ ಮೇಲಿನ ಕಲೆಗಳು ಇಲ್ಲವಾಗುತ್ತದೆ ಹಾಗೂ ಚರ್ಮದ ತೇವಾಂಶ ಹೆಚ್ಚಿ ಚರ್ಮವು ಮೃದುವಾಗುತ್ತದೆ. ಓಟ್ ಮೀಲ್ ನಿಮ್ಮ ಚರ್ಮದ ಪದರಗಳನ್ನು ಸ್ವಚ್ಚಗೊಳಿಸುವುದರಿಂದ ನಿರ್ಜೀವ ಕಣಗಳನ್ನು ತೆಗೆಯಲು ಸಹಾಯಮಾಡುತ್ತದೆ. ಟೊಮ್ಯಾಟೋದಲ್ಲಿರುವ ಸಂಕುಚಕ ಗುಣ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಈ ಮಿಶ್ರಣವನ್ನು ವಾರಕ್ಕೆ ಒಮ್ಮೆ ಬಳಸುವುದರಿಂದ ಕಂದನ್ನು ನಿವಾರಿಸಿ ಹೊಳೆಯುವ ಚರ್ಮವನ್ನು ಹೊಂದಬಹುದು.

ಬಾದಾಮಿ ಎಣ್ಣೆಯ ಮುಖ ಲೇಪನ (Almond oil face pack)

ನಿಮ್ಮ ಚರ್ಮವನ್ನು ತಿಳಿಯಾಗಿಸುವುದಕ್ಕೆ ಸಿಹಿ ಬಾದಾಮಿಯ ಎಣ್ಣೆಯಿಂದ ಮಾಲಿಶು ಮಾಡಿಕೊಳ್ಳಿ ಮಾಲಿಶಿಗೆ ಮುನ್ನ ಬಾದಾಮಿ ಎಣ್ಣೆಯನ್ನು ಪರೋಕ್ಷವಾಗಿ ಬೆಚ್ಚಗೆ ಮಾಡಿಕೊಳ್ಳಿ. ಇದರಿಂದ ಮುಖದ ರಕ್ತ ಪರಿಚಲನೆ ಹೆಚ್ಚಿ ಮುಖದ ಬಣ್ಣ ತಿಳಿಯಗುತ್ತದೆ. ಬಾದಾಮಿಯನ್ನು ಇನ್ನೊಂದು ರೀತಿಯಲ್ಲೂ ಬಳಸಬಹುದು. ಕೆಲವು ಬಾದಮಿಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳ್ಳಿಗ್ಗೆ ಅದನ್ನು ರುಬ್ಬಿ. ರುಬ್ಬಿದ ಬಾದಾಮಿಗೆ ಸ್ವಲ್ಪ ಮೊಸರನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ ನಂತರ ಅದನ್ನು ಹದಿನೈದು ನಿಮಿಷ ಬಿಟ್ಟುಬಿಡಿ. ನಂತರ ಮುಖವನ್ನು ನೀರಿನಿಂದ ವೃತ್ತಾಕಾರವಾಗಿ ಉಜ್ಜಿ ತೊಳೆಯಿರಿ. ಇದರಿಂದ ನಿರ್ಜೀವ ಕಣಗಳು ತೊರೆದು ನಿಮ್ಮ ಚರ್ಮ ಬಿಳಿಯಾಗುತ್ತದೆ.

ಪುದೀನಾ ಎಲೆಗಳ ಮುಖ ಲೇಪನ (Mint leaves face pack)

ಪುದೀನಾ ಎಲೆಗಳಿಗೆ ಆಹ್ಲಾದಕಾರಿ ಗುಣವಿದೆ. ಇದನ್ನು ಬಳಸಿ ಚರ್ಮದ ಬಣ್ಣ ವನ್ನು ತಿಳಿಯಾಗಿಸುವುದು ಸಾಧ್ಯ. ಅಷ್ಟೇ ಅಲ್ಲದೆ ಇದರಲ್ಲಿ ಸಂಕುಚಕ ಗುಣವಿರುವುದರಿಂದ ಇದು ಚರ್ಮವನ್ನು ಶುದ್ದಗೊಳಿಸುತ್ತದೆ. ಪುದೀನಾ ಎಲೆಗಳನ್ನು ಮುಖವಾಡದಂತೆ ಹಚ್ಚಿಕೊಂಡು ಹದಿನೈದು ನಿಮಿಷಗಳ ನಂತರ ತೊಳೆಯಿರಿ. ಇದರಿಂದ ರೊಮಕೂಪಗಳು ಶುದ್ದಿಯಾಗಿ ಕಂದು ಹಾಗೂ ಬಾಡಿದ ಚರ್ಮದ ನಿವಾರಣೆಯೂ ಆಗಿ ಚರ್ಮ ಬಿಳಿ ಬಣ್ಣವನ್ನು ಹೊಂದುತ್ತದೆ.

ಬಾಳೆಹಣ್ಣಿನಿಂದ ಚರ್ಮ ಬಿಳಿಯಾಗಲು ಮುಖ ಲೇಪನ (Banana face pack for whitening skin)

ಚರ್ಮವನ್ನು ಬಿಳಿಯಾಗಿಸಲು ಬಾಳೆಹಣ್ಣು ಬಹಳ ಪರಿಣಾಮಕಾರಿ. ಬಾಳೇಹಣ್ಣಿನ ತಿರುಳನ್ನು ಮುಖಕ್ಕೆ ಹಚ್ಚಿಕೊಂಡರೆ ಬಹಳ ಬೇಗ ಫಲಿತಾಂಶಗಳನ್ನು ಕಾಣಬಹುದು. ಹಣ್ಣಾಗಿರುವ ಹಳದಿ ಬಾಳೆಹಣ್ಣನ್ನು ತೆಗೆದುಕೊಂಡು ಅದಕ್ಕೆ ಜೇನುತುಪ್ಪ, ಒಂದು ಚಮಚೆ ಮೊಸರು ಬೆರೆಸಿ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಹದಿನೈದು ನಿಮಿಷಗಳ ನಂತರ ತೊಳೆಯಿರಿ. ಇದನ್ನು ಮಾಡುವುದರಿಂದ ಚರ್ಮವು ಬಿಳಿಯಾಗುತ್ತದೆ ಹಾಗೂ ಕಂದು ಸಹ ನಿವಾರಣೆಯಾಗುತ್ತದೆ.

ಒಣಗಿದ ಕಿತ್ತಳೆ ಹೊಟ್ಟಿನಿಂದ ಮುಖ ಲೇಪನ (Dry orange peels face pack for skin whitening)

ಕಿತ್ತಳೆ ಹೊಟ್ಟನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬಹುದು ಅಥವಾ ಮಾರುಕಟ್ಟೆಯಿಂದ ಪುಡಿಯನ್ನು ಕೊಂಡು ತರಬಹುದು. ಒಂದು ಚಮಚೆ ಕಿತ್ತಳೆ ಹೊಟ್ಟಿನ ಪುಡಿಯನ್ನು ಮೊಸರಿಗೆ ಬೆರೆಸಿ ಗಟ್ಟಿಯಾಗಿ ಕಲೆಸಿಕೊಳ್ಳಿ. ಗಟ್ಟಿಯಾದ ಮೊಸರನ್ನು ಬಳಸುವುದರಿಂದ ತೊಟ್ಟಿಕ್ಕುವುದನ್ನು ತಡೆಯಬಹುದು. ಕಣ್ಣಿನ ಭಾಗವನ್ನು ಬಿಟ್ಟು ಮುಖಕ್ಕೆ ಹಚ್ಚಿಕೊಳ್ಳಿ. ಹದಿನೈದು ನಿಮಿಷಗಳ ನಂತರ ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯಿರಿ. ಇದರಿಂದ ಮುಖ ಬಿಳಿಯಾಗಿ ಹೊಳೆಯುವುದನ್ನು ಕಾಣಬಹುದು.

ಬಿಳಿಯಾದ ಚರ್ಮಕ್ಕಾಗಿ ಶ್ರೀಗಂಧದ ಪುಡಿ (Sandal wood powder for getting whitening skin)

ನಿಮ್ಮ ಚರ್ಮ ಜಿಡ್ದಾಗಿದೆಯೇ? ಬಿಳಿಯಾದ ಚರ್ಮಹೊಂದಬೇಕು ಎಂದು ನಿಮ್ಮ ಆಸೆಯೇ? ಆದರೆ ನಿಮ್ಮಗಾಗಿ ಈ ವಿಶೇಷ ಮುಖ ಲೇಪನ. ಶ್ರೀಗಂಧದ ಪುಡಿಯನ್ನು ನೀರಿನಲ್ಲಿ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ ಅದು ಒಣಗಿದ ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ. ಇದರಿಂದ ತ್ವರಿತ ಫಲಿತಾಂಶವನ್ನು ಪಡೆಯಬಹುದು.

ಮೇಲಿನ ಸಲಹೆಗಳನ್ನು ಬಳಸಿ ಬಿಳಿಯಾದ ಚರ್ಮವನ್ನು ಪಡೆಯಿರಿ.

ನೈಸರ್ಗಿಕ ಪದಾರ್ಥಗಳನ್ನು ಬಳಸಿ ಚರ್ಮವನ್ನು ಬಿಳಿಯಾಗಿಸುವ ಮುಖ ಲೇಪನಗಳು (Face packs using natural ingredients for whitening the skin)

ಹಾಲು, ಜೇನುತುಪ್ಪ, ಮೊಸರು ಹಾಗೂ ಹಣ್ಣುಗಳನ್ನು ಬಳಸಿ ಮನೆಯಲ್ಲಿಯೇ ತಯಾರಿಸಿಕೊಳ್ಳುವ ನೈಸರ್ಗಿಕವಾದ ಮುಖ ಲೇಪನಗಳು ಗೌರವರ್ಣ ಪಡೆಯಲು ಬಹಳ ಪರಿಣಾಮಕಾರಿ.

ಕೇಸರಿ ಹಾಗೂ ಹಾಲಿನ ಲೇಪನ (Saffron and milk pack)

ಚರ್ಮವನ್ನು ಬಿಳಿಯಾಗಿಸುವಲ್ಲಿ ಬಹಳ ಸಹಾಯಕಾರಿ ಮುಖ್ಯವಾಗಿ ಒಣ ಚರ್ಮವನ್ನು. ಮೊಡವೆ ಹಾಗೂ ಬೊಕ್ಕೆಗಳನ್ನು ನಿವಾರಿಸಲು ಹಾಗೂ ಮತ್ತಷ್ಟು ಚರ್ಮ ಸಂಬಂಧಿ ಸಮಸ್ಯೆಗಳಿಗೆ ಕೇಸರಿ ನೈಸರ್ಗಿಕವಾದ ಮದ್ದು. ಇದು ಚರ್ಮಕ್ಕೆ ಶುದ್ದಿಕಾರಕ, ಬಿಳುಪುಕಾರಕ ಹಾಗೂ ತೇವಾಂಶವನ್ನು ಸಹ ನೀಡುತ್ತದೆ. ಹಸಿ ಹಾಲು ಚರ್ಮಕ್ಕೆ ಬಹಳ ಪರಿಣಾಮಕಾರಿ ಶುದ್ದಿಕಾರಕ ಹಾಗೂ ಚರ್ಮವನ್ನು ಬಿಳಿಯಾಗಿಸುತ್ತದೆ. ಒಂದು ಚಮಚೆ ಕೇಸರಿ ಹಾಗೂ ಒಂದು ಚಮಚೆ ಹಾಲನ್ನು ಬೆರೆಸಿ ಮುಖಕ್ಕೆ ವೃತ್ತಾಕಾರವಾಗಿ ಹಚ್ಚಿಕೊಂಡು ಎರಡು ನಿಮಿಷ ಮಾಲಿಶು ಮಾಡಿಕೊಳ್ಳಿ. ಹದಿನೈದು ನಿಮಿಷಗಳ ನಂತರ ನೀರಿನಲ್ಲಿ ತೊಳೆಯಿರಿ.

ಟೊಮ್ಯಾಟೋ ಹಾಗೂ ನಿಂಬೆ ಹಣ್ಣಿನ ಲೇಪನ (Tomato and lemon pack)

ಚರ್ಮದ ಮಚ್ಚೆಗಳನ್ನು ತೊಲಗಿಸಿ, ಕಾಂತಿಯುತವಾಗಿ ಮಾಡಲು ಆಲೂಗಡ್ಡೆ ಒಂದು ಪುರಾತನ ಮದ್ದು. ಅಷ್ಟೇ ಅಲ್ಲದೆ ಜಿಡ್ಡು ಚರ್ಮ ಇರುವವರಿಗೆ ಕಪ್ಪು ಕಲೆಗಳನ್ನು ತೆಗೆಯಲು ಸಹ ಆಲೂಗಡ್ಡೆ ಬಹಳ ಪ್ರಯೋಜನಕಾರಿ. ಕಣ್ಣುಗಳ ಸುತ್ತ ಬರುವ ಕಪ್ಪು ವ್ರುತ್ತಗಳನ್ನು ಇಲ್ಲವಾಗಿಸಿ ಚರ್ಮಕ್ಕೆ ಬಿಳಿಬಣ್ಣ ತರಲು ಸಹ ಇದು ಬಹಳ ಉಪಯುಕ್ತ. ಹೊತ್ತು ತೆಗೆದು ಅರೆದ ಆಲೂಗಡ್ದೆಗೆ ಒಂದು ನಿಂಬೆ ಹಣ್ಣಿನ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ ಹಾಗೂ ಇಪತ್ತು ನಿಮಿಷಗಳ ನಂತರ ತೊಳೆಯಿರಿ.

ಮೊಸರು ಹಾಗೂ ಓಟ್ಸ್ ನ ಲೇಪನ (Curd and oats pack)

ಮೊಸರು ಹಾಗೂ ಓಟ್ಸ್ ನ ಲೇಪನ ವಯಸ್ಸಿನೊಂದಿಗೆ ಬರುವ ಕಲೆಗಳನ್ನು, ಸೂರ್ಯನಿಂದ ಆಗುವ ಕಂದು ಹಾಗೂ ಅಸಹಜ ಚರ್ಮದ ಬಣ್ಣದಿಂದ ಕಾಪಾಡಲು ಒಂದು ಒಳ್ಳೆ ಉಪಾಯ. ಓಟ್ಸ್ ಒಂದು ನೈಸರ್ಗಿಕ ಶುದ್ದಿಕಾರಕ ಆಗಿರುವುದರಿಂದ ಚರ್ಮದಲ್ಲಿನ ಕಲ್ಮಶಗಳನ್ನು ಹಾಗೂ ನಿರ್ಜೀವ ಕಣಗಳನ್ನು ತೆಗೆದು ಚರ್ಮವನ್ನು ಒಪ್ಪವಾಗಿಸುತ್ತದೆ ಅಷ್ಟೇ ಅಲ್ಲದೆ ಮೊಡವೆ ಹಾಗೂ ಬೊಕ್ಕೆಗಳು ಹೊಡೆದು ಆಗುವ ತೊಂದರೆಗಳನ್ನು ತಪ್ಪಿಸುವಲ್ಲಿ ಸಹ ಸಹಾಯ ಮಾಡುತ್ತದೆ. ಮೊಸರು ಹಾಗೂ ಓಟ್ಸ್ ಅನ್ನು ಬೆರೆಸಿ ಆ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಇಪತ್ತು ನಿಮಿಷಗಳ ನಂತರ ವೃತ್ತಾಕಾರವಾಗಿ ಉಜ್ಜುತ್ತಾ ಅದನ್ನು ತೊಳೆಯಿರಿ.

ಕಿತ್ತಳೆ ಹಣ್ಣಿನ ಹೊತ್ತು ಹಾಗೂ ಶ್ರೀ ಗಂಧದ ಮುಖ ಲೇಪನ (Orange peel and sandalwood pack)

“ಸೀ” ಜೀವಸತ್ವ ಹೇರಳವಾಗಿರುವ ಕಿತ್ತಳೆ ಹಣ್ಣು ಚರ್ಮಕ್ಕೆ ಪುಂಡ ಅಣುಗಳಿಂದ ಆಗುವ ಹಾನಿಯಿಂದ ಕಾಪಾಡುತ್ತದ್ದೆ. ಇವೆರಡೂ ಪದಾರ್ಥಗಳನ್ನು ಬೆರೆಸಿ ಬಳಸುವುದರಿಂದ ಕಪ್ಪು ಕಲೆಗಳನ್ನು ಹಾಗೂ ಮತ್ತಷ್ಟು ಚರ್ಮ ಸಂಬಂಧಿ ವ್ಯಾದಿಗಳಿಂದ ಮುಕ್ತಿ ಹೊಂದಬಹುದು. ಈ ಮುಖ ಲೇಪನ ಮುಖದ ಚರ್ಮವನ್ನು ಶುದ್ದಿಗೊಳಿಸಿ ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ. ಒಂದು ಚಮಚ ಕಿತ್ತಳೆ ಹೊಟ್ಟಿನ ಪುಡಿ ಹಾಗೂ ಒಂದು ಚಮಚ ಶ್ರೀ ಗಂಧದ ಪುಡಿಗೆ ಸ್ವಲ್ಪ ನೀರನ್ನು ಬೆರೆಸಿ ಗಟ್ಟಿಯಾದ ಮಿಶ್ರಣವನ್ನು ತಯಾರಿಸಿಕೊಳ್ಳಿ. ಮಿಶ್ರಣವನ್ನು ತೆಗೆದುಕೊಂಡು ಮುಖಕ್ಕೆ ಐದು ನಿಮಿಷ ಮಾಲಿಶು ಮಾಡಿ. ಹದಿನೈದು ನಿಮಿಷ ಲೇಪನವನ್ನು ಒಣಗಲು ಬಿಟ್ಟು ನಂತರ ತೊಳೆಯಿರಿ.

ನೆಲಮುಳ್ಳಿ(Strawberry) ಹಾಗೂ ಜೇನುತುಪ್ಪದ ಮುಖ ಲೇಪನ (Strawberries and honey face pack)

ನೆಲಮುಳ್ಳಿ(Strawberry) ಹಾಗೂ ಜೇನುತುಪ್ಪದ ಮುಖ ಲೇಪನ ಚರ್ಮದ ಬಣ್ಣವನ್ನು ತಿಳಿಯಾಗಿಸಲು ಒಂದು ಉಪಯುಕ್ತ ಮದ್ದು. ಇದನ್ನು ಎಲ್ಲ ವಯೋಮಾನದ ಹಾಗೂ ಎಲ್ಲ ರೀತಿಯ ಚರ್ಮವುಳ್ಳವರು ಸಹ ನಿತ್ಯವೂ ಬಳಸಬಹುದು. ಎರಡು ನೆಲಮುಳ್ಳಿ ಹಣ್ಣುಗಳನ್ನು ಹಿಚುಕಿ, ಅದರ ತಿರುಳಿಗೆ ಸ್ವಲ್ಪ ಹಾಲು ಹಾಗೂ ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಇಪತ್ತು ನಿಮಿಷಗಳ ತರುವಾಯ ತಣ್ಣನೆಯ ನೀರಿನಿಂದ ಮುಖವನ್ನು ತೊಳೆಯಿರಿ.

ನಿಂಬೆ ರಸ ಹಾಗೂ ಹಾಲಿನ ಪುಡಿ (Lemon juice and milk powder)

ಈ ಮೇಲಿನ ಪದರ್ಥಗಳನ್ನು ಬಳಸಿ ಮಾಡಿಕೊಳ್ಳುವ ಮಿಶ್ರಣವನ್ನು ಎರಡು ದಿನಕ್ಕೆ ಒಮ್ಮೆ ಬಳಸಿದರೆ ಚರ್ಮ ಹೊಳಪನ್ನು ಪಡೆಯುತ್ತದೆ ಅಷ್ಟೇ ಅಲ್ಲದೆ ಕಪ್ಪು ಕಲೆ, ಕಂದು ಸಹ ನಿವಾರಣೆ ಆಗುತ್ತದೆ. ಹಾಲಿನ ಪುಡಿ, ಜೇನುತುಪ್ಪ ಹಾಗೂ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಮಿಶ್ರಣವನ್ನು ತಯಾರಿಸಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ ಇಪತ್ತು ನಿಮಿಷ ಹಾಗೆಯೇ ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ಮಾಲಿಶು ಮಾಡಿಕೊಂಡು ನಂತರ ತೊಳೆಯಿರಿ.

ಅಕ್ರುಟ್ ಹಾಗೂ ಹಾಲಿನ ಕೆನೆಯ ಮುಖ ಲೇಪನ (Walnut and milk cream pack)

ಅಕ್ರುಟ್ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಿಗಳು, “ಈ” ಹಾಗೂ “ಬಿ” ಜೀವಸತ್ವಗಳು ಹೇರಳವಾಗಿರುವುದರಿಂದ ಅದು ನಿಮ್ಮ ಚರ್ಮವನ್ನು ಒತ್ತಡ ಹಾಗೂ ನಿರ್ಜೀವ ಕಣಗಳಿಂದ ಕಾಪಾಡಿ ಆರೋಗ್ಯವಾಗಿರಿಸುತ್ತದೆ. ಅಷ್ಟೆಅಲ್ಲದೆ ಚರ್ಮ ಮುದಿಯಾಗುವುದನ್ನು ಸಹ ತಡೆಯುತ್ತದೆ. ಹಾಲಿನ ಕೆನೆ ಚರ್ಮಕ್ಕೆ ತೇವಾಂಶ ನೀಡಿ ಚರ್ಮಕ್ಕೆ ಬಿಳಿ ಬಣ್ಣ ನೀಡಲು ಮುಂಚಿನಿಂದ ಬಳಸುವ ಮದ್ದಾಗಿದೆ.
ಗೌರವರ್ಣ ಹಾಗೂ ಹೊಳೆಯುವ ಚರ್ಮಕ್ಕಾಗಿ ಮನೆ ಮದ್ದುಗಳು

ಹೊಳೆಯುವ ಚರ್ಮಕ್ಕಾಗಿ ಲೊಳೆಸರ (Aloe vera gel for glowing fair skin)

ಬಹಳಷ್ಟು ಮನೆಗಳಲ್ಲಿ ಲೊಳೆಸರ ಬೆಳೆಸುವುದರಿಂದ ಪ್ರತಿ ಒಬ್ಬರ ಸೌಂದರ್ಯ ನಿರ್ವಹಣೆಯು ಬಹಳ ಸುಲಭ ಸಾಧ್ಯ. ಇತ್ತೀಚ್ಚೆಗೆ ಲೊಳೆಸರ ಬಳಸುವುದರಿಂದ ಸುಲಭವಾಗಿ ಗೌರವರ್ಣವನ್ನು ಪಡೆಯಬಹುದು ಎಂದು ತಿಳಿದುಬಂದಿದೆ. ಹೆಚ್ಚು ಕರ್ವಣ್ನ ಉತ್ಪತ್ತಿಯಾಗುವುದರಿಂದ ಕೆಲವರ ಚರ್ಮ ಕಪ್ಪು ಬಣ್ಣಕ್ಕೆ ತಿರುಗಬಹುದು. ಅಥವಾ ಅಸಹಜ ವರ್ಣದ ಸಮಸ್ಯೆ ಬರಬಹುದು. ಆದರೆ ಲೋಳೆಸರದ ತಿರುಳನ್ನು ಚರ್ಮಕ್ಕೆ ಹಚ್ಚುವುದರಿಂದ ಚರ್ಮದ ಬಣ್ಣ ಬಿಳಿಯಾಗಿ ಆರೋಗ್ಯವಂತವಾಗುತ್ತದೆ.

ಲೋಳೆಸರವನ್ನು ಕತ್ತರಿಸಿ ಅದರ ನಡುವೆ ಇರುವ ತಿರುಳನ್ನು ತೆಗೆದುಕೊಳ್ಳಬೇಕು. ನಂತರ ತೆಗೆದುಕೊಂಡ ತಿರುಳನ್ನು ಕಪ್ಪಗಿರುವ ಚರ್ಮದ ಭಾಗಕ್ಕೆ ಹಚ್ಚಬೇಕು. ಮೂವತ್ತು ನಿಮಿಷ ಅದು ಒಂದಾಗಿದ ನಂತರ ನೀರಿನಿಂದ ತೊಳೆಯಬೇಕು.

ಹೊಳೆಯುವ ಚರ್ಮಕ್ಕಾಗಿ ಪಪಾಯ ಮುಖ ಲೇಪನ (Papaya face pack for glowing skin)

ಹಣ್ಣಾದ ಪಪಾಯ ಸಹ ನಿಮ್ಮ ಚರ್ಮವನ್ನು ತಿಳಿಯಾಗಿಸುವಲ್ಲಿ ಬಹಳ ಪ್ರಭಾವಶಾಲೀ. ಮಾರುಕಟ್ಟೆಯಲ್ಲಿ ಸಹ ನೀವು ಪಪಾಯದ ಸಾರವಿರುವ ಅನೇಕ ಉತ್ಪನ್ನಗಳನ್ನು ನೋಡಿರಬಹುದು. ಪಪಾಯ ಒಂದು ನೈಸರ್ಗಿಕ ಬಿಳಿಪುಕಾರಕವಾಗಿರುವುದರಿಂದ ಹಾಗೂ ನೈಸರ್ಗಿಕ ಪಾಯದಲ್ಲಿರುವ ಪೋಷಕಾಂಶಗಳು ಚರ್ಮಕ್ಕೆ ಉಪಯುಕ್ತವಾಗಿರುವುದರಿಂದ ನಿಮ್ಮ ಮುಖಕ್ಕೆ ಪಪಾಯ ಬಳಸುವುದು ಸರಿಯಷ್ಟೆ. ಹಣ್ಣಾದ ಪಪಾಯ ಹಣ್ಣನ್ನು ಎರಡು ದಿನಕ್ಕೆ ಒಮ್ಮೆ ತಿನ್ನುವುದರಿಂದಲು ಸಹ ಚರ್ಮದ ಕಲ್ಮಶಗಳನ್ನು ಹೋಗಲಾಡಿಸಬಹುದು.

ಅಥವಾ ಹಣ್ಣಾದ ಪಪಾಯ ಹಣ್ಣನ್ನು ಹೆಚ್ಚಿ ಅದರ ಹೊಳನ್ನು ಮುಖಕ್ಕೆ ಹಚ್ಚಿಕೊಳ್ಳಬಹುದು. ಹಚ್ಚಿಕೊಂಡ ನಂತರ ಹದಿನೈದು ಇಪತ್ತು ನಿಮಿಷಗಳು ಒಣಗಲು ಬಿಡಿ. ನಂತರ ತಣ್ಣನೆಯ ನೀರಿನಿಂದ ಮುಖವನ್ನು ತೊಳೆಯಿರಿ ಹಾಗೂ ವ್ಯತ್ಯಾಸವನ್ನು ನೋಡಿ. ಮುಖ ಬಿಳಿಯಗುವುದಲ್ಲದೆ ಕಾಂತಿಯನ್ನು ಹೊಂದುತ್ತದೆ.

ಹೊಳೆಯುವ ಚರ್ಮಕ್ಕಾಗಿ ಸೌತೆಕಾಯಿಯ ಮುಖ ಲೇಪನ (Cucumber face pack for skin glow)

ಸೌತೆ ಕಾಯಿ ಕಲಾಜನ್ ಅನ್ನು ಗಟ್ಟಿಗೊಳಿಸಿ ಒಂದು ಅಧ್ಬುತವಾದ ಹಣ್ಣು. ಇದರಿಂದ ಚರ್ಮದ ಬಣ್ಣ ಬಿಳಿಯಾಗಿ ಚರ್ಮವು ಕೋಮಲವಾಗುತ್ತದೆ. ಸೌತೆಕಾಯಿಯನ್ನು ಚರ್ಮದ ಮೇಲೆ ಉಜ್ಜಿದರೆ ಚರ್ಮದ ಬಣ್ಣ ಬಿಳಿಯಾಗುವುದನ್ನು ಕಾಣುತ್ತೇವೆ. ಸೌತೆಕಾಯಿ ಕೋಸಂಬರಿ ಮಾಡಿಕೊಂಡು ಉಟದ ಜೊತೆಯಲ್ಲಿ ತಿನ್ನುವುದರಿಂದ ಚರ್ಮದ ಕಾಂತಿಯನ್ನು ಪಡೆಯಬಹುದು.

ಸೌತೆ ಕಾಯಿಯನ್ನು ಎರಡು ರೀತಿಯಲ್ಲಿ ಚರ್ಮಕ್ಕೆ ಹಚ್ಚಿಕೊಳ್ಳಬಹುದು. ಮೊದಲನೆಯ ವಿಧಾನವೆಂದರೆ ಅರ್ಧ ಸೌತೆಕಾಯಿಯನ್ನು ಹೋಳು ಮಾಡಿಕೊಂಡು ಅದರಿಂದ ಮುಖವನ್ನು ಉಜ್ಜಿಕೊಳ್ಳಬಹುದು. ಹೊಳು ಒಣಗುವ ತನಕ ಉಜ್ಜಿಕೊಂಡು ನಂತರ ಮತ್ತೊಂದು ಹೊಳು ತೆಗೆದುಕೊಂಡು ಉಜ್ಜಲು ಶುರುಮಾಡಿರಿ. ಎರಡನೇ ವಿಧಾನದಲ್ಲಿ ಸೌತೆಕಾಯಿಯ ಹೊಟ್ಟನ್ನು ತೆಗೆದು ಅದರ ತಿರುಳನ್ನು ರುಬ್ಬಿಕೊಂಡು ಅದರ ರಸವನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು, ಅದು ಸಂಪೂರ್ಣವಾಗಿ ಒಣಗಿದ ನಂತರ ತಣ್ಣನೆಯ ನೀರಿನಲ್ಲಿ ತೊಳೆಯಬೇಕು.

ಗುಲಾಬಿ ಪಕಳೆ ಹಾಗೂ ಹಾಲಿನಿಂದ ಮುಖ ಕಾಂತಿಯುಕ್ತವಾಗುವ ಮುಖ ಲೇಪನ (Rose petal and milk pack for face skin glow and fairness)

ಪನ್ನೀರಿನಿಂದ ಚರ್ಮಕ್ಕೆ ಆಗುವ ಲಾಭಗಳು ನಿಮ್ಮಗೆ ಗೊತ್ತೇ ಇರಬಹುದು. ಹಾಗೆಯೇ ಗುಲಾಬಿ ಪಕಳೆಗಳು ಸಹ ನಿಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಬಹಳ ಸಹಾಯವಾಗುತ್ತದೆ. ಮಾಡಬೇಕಿರುವುದು ಏನೆಂದರೆ ಕೆಲವು ಗುಲಾಬಿ ಪಕಳೆಗಳನ್ನು ನೀರಿನಲ್ಲಿ ಕುದಿಸಿರಿ. ನಂತರ ಆ ನೀರನ್ನು ತೆಗೆದುಕೊಂಡು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿಕೊಳ್ಳಿ.

ಇನ್ನೊಂದು ವಿಧಾನದಲ್ಲಿ ಗುಲಾಬಿ ಪಕಳೆಗಳನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ. ಬೇಕಾದಾಗ ಎರಡು ಚಮಚೆ ಹಾಲನ್ನು ತೆಗೆದುಕೊಂಡು ಅದಕ್ಕೆ ಗುಲಾಬಿ ಪಕಳೆಯ ಪುಡಿಯನ್ನು ಬೆರೆಸಿ ಮುಖಕ್ಕೆ ಹಚ್ಚಿರಿ. ಇದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.

ಗೌರವರ್ಣವನ್ನು ಪಡೆಯಬೇಕಾದರೆ ನೀವು ಮಾರುಕಟ್ಟೆಯಲ್ಲಿ ದೊರೆಯುವ ಪ್ರಸಾದನ ಉತ್ಪನ್ನಗಳ ಮೇಲೆ ಹಣ ಸುರಿಯಬೇಕಾಗಿಲ್ಲ. ಕೆಲವರಿಗೆ ಆ ಉತ್ಪನ್ನಗಳು ಉಪಯೋಗವಾಗುವುದಾದರೂ ಬಹಳಷ್ಟು ಜನರಿಗೆ ಇದರಿಂದ ದದ್ದುಗಳೂ ಏಳುತ್ತವೆ. ಹೀಗಾಗಿ ಹಣ ತೆತ್ತು ತೊಂದರೆ ತಂದುಕೊಂಡಂತಾಗುತ್ತದೆ. ಹೀಗಾಗಿ ನೈಸರ್ಗಿಕವಾದ ಪದಾರ್ಥಗಳನ್ನು ಬಳಸುವುದು ಬಹಳ ಒಳಿತು. ನಿಮ್ಮ ಚರ್ಮ ಕಾಂತಿರಹಿತವಾಗಿ, ನಿರ್ಜೀವವಾಗಿ ಕಾಣುತ್ತಿದ್ದಾರೆ ನಿಮ್ಮ ದೇಹದಲ್ಲಿನ ಆಮ್ಲಜನಕ ಕಮ್ಮಿಯಾಗಿರುವುದರಿಂದ ಇರಬಹುದು. ಅಷ್ಟೆಅಲ್ಲದೆ ಬೇರೆ ಯಾವುದೇ ಕಾರಣಕ್ಕೆ ಹಾಗಾಗಬಹುದು. ಆದರೆ ನೈಸರ್ಗಿಕ ವಿಧಾನಗಳಿಂದ ಇದನ್ನು ನಿವಾರಿಸಬಹುದು.

ಗೌರವರ್ಣ ಹಾಗೂ ಕಾಂತಿಯುಕ್ತ ಚರ್ಮಕ್ಕಾಗಿ ಅತ್ತ್ಯುತ್ತಮ ಮುಖ ಲೇಪನಗಳು (Best homemade skin whitening and glow face packs)

ಆಲೂಗಡ್ಡೆ ಹಾಗೂ ನಿಂಬೆಹಣ್ಣು (Potato with lemon)

ಆಲೂಗಡ್ಡೆಯನ್ನು ರುಚಿಕರವಾದ ಅಡುಗೆ ಮಾಡುವುದಕ್ಕೆ ಮಾತ್ರವಲ್ಲ ಸೌಂದರ್ಯ ವರ್ಧನೆಗೂ ಸಹ ಬಳಸಬಹುದು ಎಂದು ನಿಮ್ಮಗೆ ತಿಳಿದಿದೆಯೇ? ಆಲೂಗಡ್ಡೆಯನ್ನು ರುಬ್ಬಿ ಅದರ ತಿರುಳಿಗೆ ನಿಂಬೆ ಹಣ್ಣಿನ ರಸವನ್ನು ಕೆಲವು ಹನಿಗಳು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ಇಪತ್ತು ನಿಮಿಷ ಇರಿಸಿ ನಂತರ ತೆಗೆಯಿರಿ.

ಬಾಳೆ ಹಣ್ಣು ಹಾಗೂ ಬಾದಾಮಿ (Almond with banana)

ಬಾಳೆ ಹಣ್ಣು ಹಾಗೂ ಬಾದಾಮಿ ಪ್ರತ್ಯೇಕವಾಗಿ ಅಧ್ಬುತವಾದ ಹಣ್ಣುಗಳೇ ಆದರೂ ಅವನ್ನು ಬೆರೆಸುವುದರಿಂದ ಅವುಗಳನ್ನೂ ಒಂದು ಒಳ್ಳೆಯ ಮದ್ದಾಗಿ ಮಾಡಬಹುದು. ಬಾಳೆಹಣ್ಣು ನಿಮ್ಮ ಚರ್ಮದ ಹಿಗ್ಗುವ ಗುಣವನ್ನು ಹೆಚ್ಚಿಸುತ್ತದೆ. ಹಾಗೂ ಇದರಲ್ಲಿರುವ ಕಲಾಜೆನ್ ನಿಮ್ಮ ಚರ್ಮದ ವರ್ಣವನು ಬಿಳಿಪಾಗಿಸುವುದು ಖಚಿತ. ಬಾದಾಮಿ ಎಣ್ಣೆಯಿಂದ ಚರ್ಮದ ತೇವಾಂಶ ಹೆಚ್ಚಾಗುತ್ತದೆ. ಬಾಳೆ ತಿರುಳಿಗೆ ಒಂದು ಚಮಚೆ ಬಾದಾಮಿ ಎಣ್ಣೆಯನ್ನು ಬೆರೆಸಿ ನಿಮ್ಮ ಚರ್ಮಕ್ಕೆ ಹಚ್ಚಿಕೊಳ್ಳಿ.

ನಿಂಬೆ ಹಾಗೂ ಲೊಳೆಸರ (Lemon and aloe vera)

ಲೋಳೆಸರದ ತಿರುಳನ್ನು ಒಂದು ಡಬ್ಬಿಗೆ ತೆಗೆದು ಇರಿಸಿಕೊಳ್ಳಿ. ನಂತರ ಅದಕ್ಕೆ ನಿಂಬೆ ಹಣ್ಣನ್ನು ಬೆರೆಸಿ. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು ನಿಧಾನವಾಗಿ ಉಜ್ಜಿಕೊಳ್ಳಿ. ಮಿಶ್ರಣವು ನಿಮ್ಮ ಚರ್ಮದ ಒಳಗೆ ಇಳಿಯುವಂತೆ ಉಜ್ಜಿರಿ. ಸ್ವಲ್ಪ ಸಮಯದ ನಂತರ ಚರ್ಮ ಮೃದುವಾಗಿ ಕೋಮಲವಾಗುವುದು ನಿಮ್ಮ ಅನುಭವಕ್ಕೆ ಬರುತ್ತದೆ. ಇದನ್ನು ನೀರಿನಿಂದ ತೊಳೆಯುವ ಅವಶ್ಯಕತೆ ಇಲ್ಲ ಹಾಗಾಗಿ ಸ್ನಾನದ ನಂತರವೂ ಇದನ್ನು ಹಚ್ಚಿಕೊಳ್ಳ ಬಹುದು. ಗೌರವರ್ಣ ಬೇಕೆಂದುಕೊಳ್ಳುವವರು ಈ ವಿಧಾನವನ್ನು ಬಳಸಬಹುದು.

error: Content is protected !!